ಡಾ. ನಾ. ಮೊಗಸಾಲೆ
ಗ್ರಾಮೀಣ ವೈದ್ಯರಾಗಿ, ಸಾಹಿತಿಯಾಗಿ, ಸಾಹಿತ್ಯ ಸಂಘಟಕರಾಗಿ ಪ್ರಸಿದ್ಧರಾಗಿರುವ ನಾ.ಮೊಗಸಾಲೆಯವರು ಹುಟ್ಟಿದ್ದು ಕಾಸರಗೋಡಿನ ಮಂಜೇಶ್ವರದ ಬಳಿಯ ಮೊಗಸಾಲೆ ಎಂಬ ಪ್ರದೇಶದಲ್ಲಿ. ತಂದೆ ವಿಠಲಭಟ್ಟರು, ತಾಯಿ ಸರಸ್ವತಿ. ಪ್ರಾರಂಭಿಕ ಶಿಕ್ಷಣ ಕೋಳ್ಯೂರು, ಹೈಸ್ಕೂಲಿಗೆ ಸೇರಿದ್ದು ಕನ್ಯಾನದಲ್ಲಿ. ಉಡುಪಿಯ ಆಯುರ್ವೇದ ಕಾಲೇಜಿನಿಂದ ಡಿ.ಎಸ್.ಎ.ಸಿ. ಡಿಪ್ಲೊಮ ಪದವಿ.
ಹೈಸ್ಕೂಲಿನಲ್ಲಿದ್ದಾಗಲೇ ಸಾಹಿತ್ಯ ಕೃಷಿ ಆರಂಭ. ಭಾರತಿ, ಗೋಕುಲ, ಕೈಲಾಸ, ವಿಕ್ರಮ, ಯುಗಪುರುಷ, ನವಭಾರತ ಪತ್ರಿಕೆಗಳಿಗೆ ಬರೆದ ಕಥೆ, ಕವನ ಪ್ರಕಟಿತ.
ಡಿ.ಎಸ್.ಎ.ಸಿ. ಪದವಿ ಪಡೆದ ನಂತರ ಉದ್ಯೋಗಕ್ಕಾಗಿ ಸೇರಿದ್ದು ಕಾರ್ಕಳ ತಾಲ್ಲೂಕು ಬೋರ್ಡ್ ನಡೆಸುತ್ತಿದ್ದ ‘ರೂರಲ್ ಡಿಸ್ಪೆನ್ಸರಿ’ಯಲ್ಲಿ ಅರೆಕಾಲಿಕ ವೈದ್ಯರಾಗಿ. ಹುದ್ದೆಯ ಜೊತೆಗೆ ತೆರೆದ ಖಾಸಗಿ ಚಿಕಿತ್ಸಾಲಯ ‘ಕರ್ನಾಟಕ ಕ್ಲಿನಿಕ್’, ವೈದ್ಯಕೀಯದ ಜೊತೆಗೆ ರೂಢಿಸಿಕೊಂಡ ಸಾಹಿತ್ಯ ಸಂಘಟನೆಯ ಕಾರ್ಯಕ್ರಮ.
೧೯೬೬ರಲ್ಲಿ ಕಾಂತಾವರದಲ್ಲಿ ರೈತ ಯುವಕ ಸಂಘ ಸ್ಥಾಪನೆ. ೧೯೭೬ರಲ್ಲಿ ಬೇಲಾಡಿಯಲ್ಲಿ ಕಾಂತಾವರ ಕನ್ನಡ ಸಂಘ ಪ್ರಾರಂಭ. ೧೯೭೮ರಲ್ಲಿ ಮೂಡಬಿದಿರೆಯಲ್ಲಿ ವರ್ಧಮಾನ ಪ್ರಶಸ್ತಿ ಪೀಠ ಸ್ಥಾಪನೆಗ ಮೂಲ ಪ್ರೇರಕರು. ಕಾಂತಾವರ ಕನ್ನಡ ಸಂಘ ಮುದ್ದಣ ಪ್ರಶಸ್ತಿ ಯೋಜನೆಯಿಂದ ಸಾಹಿತ್ಯೋತ್ಸವ, ವಿಚಾರ ಸಂಕಿರಣ, ಕೃತಿ ಪ್ರಕಟಣೆಯ ಕಾರ್ಯ. ವರ್ಧಮಾನ ಪ್ರಶಸ್ತಿ ಪೀಠ ತನ್ನ ವಾರ್ಷಿಕ ಪ್ರಶಸ್ತಿ ಯೋಜನೆಯಿಂದ ನಾಡಿನಾದ್ಯಂತ ಪರಿಚಿತ.
ಸಾಹ...